ಐಸೊಪ್ರೊಪೈಲ್ ಕ್ಲೋರೈಡ್: ಮಧುರ ವಾಸನೆಯಿರುವ ಬಣ್ಣವಿಲ್ಲದ ದ್ರವವಸ್ತು. ಅಣುಸೂತ್ರ ಅ3ಊ7ಅ1. ರಚನಾಸೂತ್ರ
200 ಸೆಂ. ಉಷ್ಣತೆಯಲ್ಲಿ ಸಾಂದ್ರತೆ 0.859. ಕುದಿಯುವ ಬಿಂದು 36.50 ಸೆಂ. ನೀರಿನಲ್ಲಿ ಅದ್ರಾವ್ಯ. ಅನೇಕ ಆಗಾರ್ಯ್‌ನಿಕ್ ಲೀನಕಾರಿಗಳೊಂದಿಗೆ ಬೆರೆಯುತ್ತದೆ. ನಿರ್ಜಲ ಸತುವಿನ ಕ್ಲೋರೈಡಿನ ಸಮ್ಮುಖದಲ್ಲಿ ಹೈಡ್ರೋಕ್ಲೋರಿಕ್ ಆಮ್ಲ ಮತ್ತು ಐಸೊಪ್ರೊಪೈಲ್ ಆಲ್ಕೋಹಾಲುಗಳು ಪರಸ್ಪರ ವರ್ತಿಸಿದಾಗ ಅಥವಾ ಆಲ್ಕೋಹಾಲ್ ಮತ್ತು ಹೈಡ್ರೋಜನ್ ಕ್ಲೋರೈಡುಗಳ ಮಿಶ್ರಣವನ್ನು ಆವಿಯ ರೂಪದಲ್ಲಿ ಕಾಯಿಸಿದ ಮೆಗ್ನೀಸಿಯಂ ಕ್ಲೋರೈಡಿನ ಮೇಲೆ ಹಾಯಿಸಿದಾಗ ಐಸೊಪ್ರೊಪೈಲ್ ಕ್ಲೋರೈಡು ದೊರೆಯುವುದು. ಕೈಗಾರಿಕಾ ಪ್ರಮಾಣದಲ್ಲಿ ಇದನ್ನು ತಯಾರಿಸುವುದು ಹೀಗೆಯೇ. ಕೊಬ್ಬುಗಳಿಗೆ ಇದು ಉತ್ತಮ ಲೀನಕಾರಿ ಎನಿಸಿಕೊಂಡಿದೆ.                                          (ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ